Posts

Showing posts from March, 2023

ನನ್ನ ಈ ಹೊಸ ಧರ್ಮ

Image
ನೋಡಿ. ಇದು ಈಗ ಹೊಸಧರ್ಮವಾಗಿದೆ.ಆ ಧರ್ಮ ಗ್ರಂಥ "ಸಂವಿಧಾನ"ವಾಗಿದೆ. ಅದರ ನಿರೂಪಣೆ ನಿರ್ವಹಣೆ ಸದಾ ಪ್ರಜಾಪ್ರತಿನಿಧಿಗಳಿಂದ. ಅದರ ಮುಖ್ಯ ಪ್ರವರ್ತಕರು ಬೌದ್ಧಮತೀಯರಾಗಿದ್ದರು.ನಿಮ್ಮ ನಿಮ್ಮ ಧರ್ಮ ಗಳಿಗೆ ಅಲ್ಲೂ ಅವಕಾಶಗಳು ಮತ್ತು ಪ್ರಸ್ತಾಪಗಳೂ ಇರಲೇಬೇಕಷ್ಟೇ. ಅದನ್ನು ನೀವು ಗುಪ್ತ ಮತದಾನಗಳ ಮೂಲಕ ಇದುವರೆಗೂ ಕಾಯ್ದುಕೊಂಡು ಬಂದಿದ್ದೀರಿ.ಅದು ಇಸ್ಲಾಂ ಆಗಿರಬಹುದು,ಹಿಂದೂವೇ ಆಗಿರಬಹುದು, ಕ್ರಿಶ್ಚಿಯನ್ ಕೂಡಾ ಆಗಿರಬಹುದು. ಈ ಪ್ರಜಾಪ್ರಭುತ್ವ ದಲ್ಲಿ ಧರ್ಮ ಗಳ ಬಗ್ಗೆ ಮಾತಾಡಿಕೊಳ್ಳಲು ಖಂಡಿತಾ ನಾಚಿಕೆ ಇರಕೂಡದು ! ✍️ ಸುರೇಶ್ ಮಹರ್ಷಿ   ರಾಜ ತಾನು ತನ್ನ ರಾಜ್ಯದಲ್ಲಿ ದುಡಿಮೆಗಳನ್ನು ಮಾಡಬೇಕೆ ?ಅಥವಾ ಪ್ರಜೆ ಗಳು ದುಡಿದದ್ದನ್ನು ತನ್ನ ಬೊಕ್ಕಸಕ್ಕೆ ತುಂಬಿಸಿಕೊಳ್ಳಬೇಕೆ ಎನ್ನುವುದು ಈ ಭೂಮಿಯ ಹಳೇ ಪ್ರಶ್ನೆ.ಉತ್ತರ ಕಮ್ಯುನಿಸ್ಟ್ ಸಿದ್ಧಾಂತ ದವರೆಗೆ ಬಂದು ನಿಂತುಬಿಡುತ್ತದೆ. ಆದರೆ ಅದು ಮನುಷ್ಯ ಪ್ರೀತಿಯನ್ನು ಬಡತನವನ್ನು ಹೃದಯದಲ್ಲಿ ಇಟ್ಟು ಕೊಳ್ಳದು. ಆ "ಅಮೂರ್ತ" ರಾಜನು "ಪ್ರಜೆಗಳು ದುಡಿಯರು" ಎಂಬ ತೀರ್ಮಾನಕ್ಕೆ ಬಂದೇ ಆಡಳಿತದ ಪ್ರಾರಂಭೋತ್ಸವ ಮಾಡಿರುತ್ತಾನೆ. ಇಲ್ಲಿ ಮಹಿಳೆ ಆ ತೀರ್ಮಾನ ಮಾಡಿರುವುದಿಲ್ಲ. ಮಗು "ದುಡಿಯಬೇಕು"ಎಂದು ತಾಯಿ ಹಾಲು ಕುಡಿಸಳು✍️ ಸುರೇಶ್ ಮಹರ್ಷಿ

ಮನುಷ್ಯ ಮತ್ತು ಧರ್ಮ

Image
ರಾಮಾಯಣದಲ್ಲಿ ಪ್ರಾರಂಭವಾದ ಸಮಾಜದೊಳಗಿನ ಧರ್ಮದ ಚರ್ಚೆ ಅಂದರೆ ಸಮಾಜ ಹೇಗಿರಬೇಕೆಂಬ ಚರ್ಚೆ ಮಹಾಭಾರತದ ಯುದ್ಧದವರೆಗೂ ಬಂದು ಮುಕ್ತಾಯವಾಯಿತು. ಮಹಾಭಾರತದ ನಂತರ ಪಾಂಡವರು ಹೇಗೆ ಆಡಳಿತ ಮಾಡಿದರೂ ಎನ್ನುವುದಕ್ಕಿಂತ ಅವರು ಹೇಗೇ ಬದುಕಿಹೋದರು ಎನ್ನುವುದು ಮುಖ್ಯ ವಾಯಿತು. ಅದನ್ನೇ ವೇದಸಂಗ್ರಹದಲ್ಲಿಯೂ ಭಗವದ್ಗೀತೆಯಲ್ಲಿಯೂ ವೇದ ವ್ಯಾಸರು ತಿಳಿಸಿದರು. ಅಲ್ಲಿಯವರೆಗೂ ವೈಯುಕ್ತಿಕ ಮೋಕ್ಷ ಪುಣ್ಯ ಸ್ವರ್ಗ ಪ್ರಾಪ್ತಿ ಇತ್ಯಾದಿಯಾಗಿದ್ದ ಧರ್ಮವು ಸಾಮಾಜಿಕ ಪ್ರಜ್ಞೆಯೂ ಆಯಿತು. ಆದರೆ ಇದನ್ನು ಒಪ್ಪದವರು ಶೂದ್ರರು ಎನಿಸಿಕೊಂಡರು ಅಷ್ಟೇ. ಶೂದ್ರ ಎನ್ನುವುದೇ ಯಾವ ಧರ್ಮವೂ ಆಗಲಾರದು. ಆದರೆ ಶೂದ್ರ ಸ್ಥಿತಿಯೂ ಪಾಪಕರ್ಮ ಅಂತೇನೂ ಇಲ್ಲ. ಜೊತೆಗೆ ಇದೇ ಮುಂದುವರಿದು ಶೂದ್ರತ್ವದಿಂದಲೇ ಅಂದರೆ ಧರ್ಮವಿಲ್ಲದಿರುವಿಕೆಯಿಂದಲೇ ಈ ಭೂಮಿಯಲ್ಲಿ ಧರ್ಮಗಳು ಸಂಭವಿಸಿವೆ.ಮತ್ತು ಸಂಭವಿಸಲು ಇನ್ನೂ ಸಾಧ್ಯವಿದೆ.ಜೈನ ಧರ್ಮದ ಆಚರಣೆ ಅಂತಿಮವಾಗಿದೆ. ಸ್ವರ್ಗದ ಅವಶ್ಯಕತೆಯೇ ಇಲ್ಲದ ಮೋಕ್ಷದ ಮೌನವೂ ಮುನಿಯೂ ಆಗಿದೆ.ಇತ್ಯಾದಿ. ✍️ ಸುರೇಶ್ ಮಹರ್ಷಿ  ಅದ್ವೈತ ಮತ್ತು ದ್ವೈತ ಚರ್ಚೆ ಯು ಆತ್ಮ ವಿಷಯಗಳಿಗೆ ಅತ್ಯಂತ ಸೂಕ್ತ ವಾಗಿವೆ. ಅದು ವಿಜ್ಞಾನದಂತೆ ಸೃಷ್ಟಿ ರಹಸ್ಯಗಳವರೆಗೂ ಹೋಗಿ ಮಹಿಳೆ ವಿಷಯದಲ್ಲಿ ಮೌನವಾಗುವುದು. ಮುಂದಿನದು ತ್ರೈತ ವಿಜ್ಞಾನದ ರಹಸ್ಯದ ಅನಾವರಣ!ಆದರೆ ಕಾಲ ಬಂದಿಲ್ಲ. ಬಹುಷಃ ಬಾರದು 🙏 ಸುರೇಶ್ ಮಹರ್ಷಿ

ನಾನು ಮಕರಂದ ಪರಾಗ ಒಟ್ಟು ಮಾಡಿಕೊಂಡು ಬರುವುದು ಸಹಜ

Image
ನಾನು ತಂದ ಮಕರಂದ ಪರಾಗಗಳಿಗೆ ನನ್ನ ಮನೆಯಲ್ಲಿ ಅನುಮತಿಯಿಲ್ಲವೇ. ಇಲ್ಲಿ ಮಲಗಿರುವ ಎಲ್ಲಾ ಗೂಡಿನನೊಳಗಿನ ಸುಪ್ತರು ನನ್ನ ಮಕ್ಕಳೂ ಅಲ್ಲವೇ. ನನಗೆ ಅಕ್ಸಪ್ಟೇನ್ಸ್ ಬೇಕೇ ಬೇಕು ✍️ ಸುರೇಶ್  ಅದೇ ಇದು https://www.instagram.com/reel/CLxJMJOJmy_/?igshid=YmMyMTA2M2Y=

ಬರೆಯುತ್ತಾ ಹೋದಾಗ ಅನಿಸಿತು

Image
ನನ್ನ ದೇಶವನ್ನು ಮತ್ತು ನಮ್ಮವರನ್ನು ನೆನೆದಾಗಲೆಲ್ಲ ದುಃಖ ವಾಗುತ್ತದೆ. ಇನ್ನೇನು ಗುಲಾಮಗಿರಿ ಮುಗಿಯಿತು ನಮ್ಮ ತನಗಳಿಂದ ಬದುಕಬಹುದೆಂದು ನಿಟ್ಟುಸಿರು ಬಿಡುವಷ್ಟರಲ್ಲಿ ಜೇಮ್ಸ್ ಬಾಂಡ್ ಗೆ ಆದಂತೆ ಮತ್ತೆ ಹೊಸ ಸಮಸ್ಯೆಗಳು. ಈಗ ಯಾವ ಸಿದ್ಧಾಂತದಲ್ಲಿ ಬದುಕ ಬೇಕೆನ್ನುವುದೇ ಸಮಸ್ಯೆ. ಬಡವರಾಗಿ ಇರುತ್ತಾ ಹೋಗುವುದೋ ಅಥವಾ ಸ್ವಲ್ಪ ಶ್ರೀಮಂತರಾಗಲು ಪ್ರಯತ್ನ ಮಾಡಬೇಕೋ ಹೇಗೇ ಅಂತಲೇ ಎಲ್ಲರ ಸಮಸ್ಯೆ. ✍️ ಸುರೇಶ್ ಮಹರ್ಷಿ