ಮನುಷ್ಯ ಮತ್ತು ಧರ್ಮ

ರಾಮಾಯಣದಲ್ಲಿ ಪ್ರಾರಂಭವಾದ ಸಮಾಜದೊಳಗಿನ ಧರ್ಮದ ಚರ್ಚೆ ಅಂದರೆ ಸಮಾಜ ಹೇಗಿರಬೇಕೆಂಬ ಚರ್ಚೆ ಮಹಾಭಾರತದ ಯುದ್ಧದವರೆಗೂ ಬಂದು ಮುಕ್ತಾಯವಾಯಿತು. ಮಹಾಭಾರತದ ನಂತರ ಪಾಂಡವರು ಹೇಗೆ ಆಡಳಿತ ಮಾಡಿದರೂ ಎನ್ನುವುದಕ್ಕಿಂತ ಅವರು ಹೇಗೇ ಬದುಕಿಹೋದರು ಎನ್ನುವುದು ಮುಖ್ಯ ವಾಯಿತು. ಅದನ್ನೇ ವೇದಸಂಗ್ರಹದಲ್ಲಿಯೂ ಭಗವದ್ಗೀತೆಯಲ್ಲಿಯೂ ವೇದ ವ್ಯಾಸರು ತಿಳಿಸಿದರು. ಅಲ್ಲಿಯವರೆಗೂ ವೈಯುಕ್ತಿಕ ಮೋಕ್ಷ ಪುಣ್ಯ ಸ್ವರ್ಗ ಪ್ರಾಪ್ತಿ ಇತ್ಯಾದಿಯಾಗಿದ್ದ ಧರ್ಮವು ಸಾಮಾಜಿಕ ಪ್ರಜ್ಞೆಯೂ ಆಯಿತು. ಆದರೆ ಇದನ್ನು ಒಪ್ಪದವರು ಶೂದ್ರರು ಎನಿಸಿಕೊಂಡರು ಅಷ್ಟೇ. ಶೂದ್ರ ಎನ್ನುವುದೇ ಯಾವ ಧರ್ಮವೂ ಆಗಲಾರದು. ಆದರೆ ಶೂದ್ರ ಸ್ಥಿತಿಯೂ ಪಾಪಕರ್ಮ ಅಂತೇನೂ ಇಲ್ಲ. ಜೊತೆಗೆ ಇದೇ ಮುಂದುವರಿದು ಶೂದ್ರತ್ವದಿಂದಲೇ ಅಂದರೆ ಧರ್ಮವಿಲ್ಲದಿರುವಿಕೆಯಿಂದಲೇ ಈ ಭೂಮಿಯಲ್ಲಿ ಧರ್ಮಗಳು ಸಂಭವಿಸಿವೆ.ಮತ್ತು ಸಂಭವಿಸಲು ಇನ್ನೂ ಸಾಧ್ಯವಿದೆ.ಜೈನ ಧರ್ಮದ ಆಚರಣೆ ಅಂತಿಮವಾಗಿದೆ. ಸ್ವರ್ಗದ ಅವಶ್ಯಕತೆಯೇ ಇಲ್ಲದ ಮೋಕ್ಷದ ಮೌನವೂ ಮುನಿಯೂ ಆಗಿದೆ.ಇತ್ಯಾದಿ. ✍️ ಸುರೇಶ್ ಮಹರ್ಷಿ
 ಅದ್ವೈತ ಮತ್ತು ದ್ವೈತ ಚರ್ಚೆ ಯು ಆತ್ಮ ವಿಷಯಗಳಿಗೆ ಅತ್ಯಂತ ಸೂಕ್ತ ವಾಗಿವೆ. ಅದು ವಿಜ್ಞಾನದಂತೆ ಸೃಷ್ಟಿ ರಹಸ್ಯಗಳವರೆಗೂ ಹೋಗಿ ಮಹಿಳೆ ವಿಷಯದಲ್ಲಿ ಮೌನವಾಗುವುದು. ಮುಂದಿನದು ತ್ರೈತ ವಿಜ್ಞಾನದ ರಹಸ್ಯದ ಅನಾವರಣ!ಆದರೆ ಕಾಲ ಬಂದಿಲ್ಲ. ಬಹುಷಃ ಬಾರದು 🙏 ಸುರೇಶ್ ಮಹರ್ಷಿ

Comments