ಆತ್ಮ
ಆ ನಿಟ್ಟಿನಲ್ಲಿ ನನ್ನದೂ ಒಂದು ಪ್ರಯತ್ನವನ್ನು ನನ್ನ ಬಾಲ್ಯದಿಂದಲೂ ಸುರುಮಾಡಿಕೊಂಡಿದ್ದೆ.ಪರಿಣಾಮ ಮೊದಲು ನಾನು ಕೇವಲ ನಾನಾಗಿದ್ದೆ. ಮತ್ತೆ ಮತ್ತೆ ನಾನು ಒಂದು ವಿಧದ ದೇಹವಾಗಿರುವುದು ಮತ್ತು ವ್ಯಕ್ತಿಯಾಗುತ್ತಿರುವುದೂ ಗೊತ್ತಾಗತೊಡಗಿದೆ. ಸುಮ್ಮನಿದ್ದರೆ ಇವೆರಡೂ ಏನೋ ಆಗುವುದು ನೋಡಿ ಪ್ರಶ್ನಸಿದಾಗ ನಾನಲ್ಲದ ನಾನು ಉತ್ತರಿಸುತ್ತಿರುವುದು ಅನಿಸಿತು.ಬಹುಷಃ ಅದು ಆತ್ಮ ವಿರಬಹುದು ಎನಿಸಿತು.ಆದರೆ ಅದು ನನ್ನ ಭಾವನೆಗಳನ್ನೂ ತಿರಸ್ಕರಿಸುತಿತ್ತು.ಅದೇನು ಪ್ರೇತವೆ ? ಪ್ರಾಣ ಎಲ್ಲಿದೆ ? ಅಥವಾ ಈ ಜೀವಕೋಶಗಳ ಜೀವಿತಾವಧಿ ಏನು ? ಅವು ಯಾರ ಮೇಲೆ ಭಕ್ತಿ ಇರಿಸಿವೆ ? ಧ್ಯಾನ ಎಲ್ಲವೂ ನೆಮ್ಮದಿ ಪಡೆಯುವುದೇಕೆ ? ನಿದ್ರೆ -ನಿದ್ದೆ ಸಾಕಾಗಬೇಕಿತ್ತು. ಹೆದರಿಕೆ ಪ್ರಾಣದೊಂದಿಗಿದೆ."ಓಂ" ಧ್ವನಿ ಒಬ್ಬರಿಗೆ ಮಾತ್ರ ವೇ. ಎದೆಯೊಳಗಿನ ಉಸಿರಿನ ನಾದ "ಮಾತಾಗಿ" ಆ ಮಾತು ಧರ್ಮಗಳನ್ನು ನುಡಿಯುವುದು.ಮತ್ತು ಮನುಷ್ಯರು ಪ್ರಾಣಿಗಳಂತಲ್ಲದ "ಹೃದಯವಂತ" ಸಮಾಜವಾದರು ✍️ ಸುರೇಶ್ ಮಹರ್ಷಿ
Comments
Post a Comment