ಯಾವುದು ಖಾಸಗಿ ಯಾವುದು ಸಾರ್ವಜನಿಕ

ಸೀತೆಯೆಂಬ ಒಬ್ಬ ವ್ಯಕ್ತಿಯ ಹೆಂಡತಿಯನ್ನು ಅದೂ ರಾಜ್ಯವೇ ಇಲ್ಲದ ಅದು ಸಿಗುವ ಸಾಧ್ಯತೆಗಳೂ ಇಲ್ಲದವಳನ್ನು ಅಪಹರಣ ಮಾಡಿದಾಗ ಅದು ಖಾಸಗಿ ಕೇವಲ ಗಂಡಹೆಂಡತಿ ವಿಷಯದ ಖಾಸಗಿ ಸಮಾಚಾರ ವಾಗಿ ಉಳಿಯಲೇ ಇಲ್ಲ. ಅದು ಭಾರತವೇ ಆಯಿತು.
ಒಂದೇ ಹೆಣ್ಣಿಗೆ ಹುಟ್ಟಿದ ?ನೂರು ಜನ ಅಣ್ಣ ತಮ್ಮಂದಿರು ಐದು ಜನ ಗಂಡಂದಿರನ್ನು ಹೊಂದಿದ್ದ ಹೆಣ್ಣೊಬ್ಬಳ ಸೀರೆಯನ್ನು ಕಿತ್ತು ಹಾಕಿದಾಗ ಆ ವಿಷಯವೂ ಸಾರ್ವಜನಿಕವಾಗಿ ಮಹಾಭಾರತವೇ ಆಗಿ ಹೋಯಿತು.

Comments